ಚಿರಂಜೀವಿ ಸರ್ಜಾ (೧೭ನೇ ಅಕ್ಟೋಬರ್ ೧೯೮೪ - ೭ನೇ ಜೂನ್ ೨೦೨೦) ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ ಧ್ರುವ ಸರ್ಜಾ ಅವರ ಸಹೋದರ, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. == ಜೀವನ == ಇವರು ಹುಟ್ಟಿದ್ದುಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ೨೦೦೯ ರಲ್ಲಿ ಬಿಡುಗಡೆಯಾದ "ವಾಯುಪುತ್ರ" ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸುಮಾರು ೪ ವರ್ಷಗಳ ಕಾಲ ತನ್ನ ಸೋದರಮಾವ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು. == ವೈಯಕ್ತಿಕ ಜೀವನ == ಇವರು ಅಕ್ಟೋಬರ್ ೨೦೧೭ ರಲ್ಲಿ ನಟಿ ಮೇಘನಾ ರಾಜ್‌ ಜೊತೆ ನಿಶ್ಚಿತಾರ್ಥ ವನ್ನು ಮಾಡಿಕೊಂಡರು. ಇದಾದ ನಂತರ ಇವರು ೨ ಮೇ ೨೦೧೮ ರಲ್ಲಿ ಮದುವೆ ಮಾಡಿಕೊಂಡರು. == ಮರಣ == ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೂನ್ ೦೭, ೨೦೨೦ ರಂದು ಹೃದಯಾಘಾತದಿಂದ ಮರಣ ಹೊಂದಿದರು.. ಅವರಿಗೆ ೩೬ ವರ್ಷ ವಯಸ್ಸಾಗಿತ್ತು. == ಚಲನಚಿತ್ರಗಳು == == ಉಲ್ಲೇಖ ==